Monday, December 20, 2010

ನಮಸ್ಕಾರ

ಈಗ ನಾನು ನಿಮಗೆ ಹೇಳ ಹೊರಟಿರುವುದು ಚಿಕ್ಕಮಗಳೂರಿನ ಕೊಪ್ಪ ತಾಲೂಕಿನಲ್ಲಿನ ಕಡೇಗದ್ದೆಯೆಂಬ ಪಕ್ಕಾ ಮಲೆನಾಡ ಗ್ರಾಮದಲ್ಲಿನ ಪಾಂಚಜನ್ಯ ಆಯುರ್ವೇದ ಆಶ್ರಮದ ಬಗ್ಗೆ.
೫೨ ವರ್ಷಗಳ ಹಿಂದೆ ದಟ್ಟಾರಣ್ಯವಾಗಿದ್ದ ಜಾಗದಲ್ಲಿ,ಈಗೊಂದು ಸುಂದರ,ಸುಸ್ಸಜ್ಜಿತ ಆಯುರ್ವೇದ ಚಿಕಿತ್ಸಾಲಯವೊಂದು ಜನಪ್ರಿಯಗೊಳ್ಳುತ್ತಿದೆ.
ಆಯುರ್ವೇದ ವೈದ್ಯ ಪದ್ಧತಿ ಬಗ್ಗೆ ನಿಮಗೆ ಒಲವು,ಅಭಿಮಾನ ಹಾಗೂ ಆಸಕ್ತಿ ಇದ್ದರೆ ಈ ಲೇಖನವನ್ನ ಒಮ್ಮೆ ಓದಿ.

"ಆಯುರ್ವೇದ"
"ಶತ ಶತಮಾನಗಳಷ್ಟು ಪುರಾತನವಾದ ಅಪ್ಪಟ ಭಾರತೀಯ ವೈದ್ಯ ಪದ್ಧತಿ.
ಪ್ರಕೃತದತ್ತ ಗಿಡಮೂಲಿಕೆಗಳ ನೆರವಿನೊಂದಿಗೆ ಹಿರಿಯರು ರೂಪಿಸಿದ ಅಪ್ಪಟ ದೇಸೀ ಚಿಕಿತ್ಸಾ ಪದ್ಧತಿ.
ಪ್ರತಿಯೊಬ್ಬ ಭಾರತೀಯನಿಗೆ ಬಳುವಳಿಯಾಗಿ ಬಂದ ಪಿತ್ರಾರ್ಜಿತ ಆಸ್ತಿ."


ಆಯುರ್ವೇದ ವೈದ್ಯ ಪದ್ಧತಿ ಕೇವಲ ರೋಗ ಗುಣಪಡಿಸುವುದಷ್ಟೇ ಅಲ್ಲದೆ,ರೋಗಿಯ ಹಾಗೂ ಪ್ರಕೃತಿಯ ನಡುವಣ ಸಂಬಂಧವನ್ನು ಮತ್ತಷ್ಟು ಆಪ್ತ ಹಾಗೂ ಅಪೂರ್ವಗೊಳಿಸುವುದರಿಂದಲೇ-
ಆಗಿನಿಂದ ಈಗಿನವರೆಗೆ ಪಾಶ್ಚಾತ್ಯ ವೈದ್ಯ ಪದ್ಧತಿಗಳ ನಡುವೆಯೂ ತನ್ನ ಪಾವಿತ್ರತೆಯನ್ನು ಹಾಗೂ ಅಸ್ತಿತ್ವವನ್ನು ಉಳಿಸಿಕೊಂಡು ಬಂದಿದೆ.

ಸುತ್ತಲೂ ಸಹ್ಯಾದ್ರಿಯ ಹಸಿರು ಬೆಟ್ಟ ಗುಡ್ಡಗಳ ಸಾಲು,
ಪಕ್ಕದಲ್ಲೇ ಹರಿವ ಕಪಿಲೆ,
ಅಕ್ಕ-ಪಕ್ಕ ತಲೆಯೆತ್ತಿ ನಿಂತಿರುವ ಅಡಿಕೆ ತೋಟ...
ಹೀಗೆ ಪ್ರಕೃತಿಯ ಮಡಿಲಲ್ಲಿರುವ ಪಾಂಚಜನ್ಯ ಆಯುರ್ವೇದ ಆಶ್ರಮ ಸುತ್ತಲಿನ ತನ್ನ ಪ್ರಕೃತಿಯ ಸೊಬಗಿನಿಂದ ಗಮನ ಸೆಳೆಯುತ್ತದೆ.
ಸುಸ್ಸಜ್ಜಿತ ವಾರ್ಡ್ ಗಳು,ಚಿಕಿತ್ಸಾ ಕೋಣೆ,ಪ್ರತ್ಯೇಕ ಪಾಕಶಾಲೆ,ಸವಿಸ್ತಾರವಾದ ಪ್ರಾಂಗಣ...
ಹೀಗೆ ಸಕಲ ಸೌಕರ್ಯಗಳ ಜೊತೆಗೆ ಪಾಂಚಜನ್ಯ ಆಯುರ್ವೇದ ಆಶ್ರಮ ತನ್ನದೇ ಆದ ಫಾರ್ಮಸಿ ಯನ್ನು ಹೊಂದಿರುವುದು ವಿಶೇಷ.
ಫಾರ್ಮಸಿ ಯಲ್ಲಿ ಸುಮಾರು ೨೦೦ ಬಗೆಯ ವಿವಿಧ ಔಷಧಿಗಳನ್ನು ಶುದ್ಧ ಆಯುರ್ವೇದ ಕ್ರಮದಲ್ಲಿ ತಯಾರಿಸಲಾಗುತ್ತದೆ.
ಅಷ್ಟೇ ಅಲ್ಲದೇ ಔಷಧ ತಯಾರಿಕೆಗೆ ಬೇಕಾದ ಗಿಡ ಮೂಲಿಕೆಗಳನ್ನು ಸುತ್ತಲಿನ ಪರಿಸರದಲ್ಲಿ,ಸಾವಯವ ಪದ್ಧತಿಯಂತೆ ಬೆಳೆಯಲಾಗುತ್ತದೆ.
ಪಾಂಚಜನ್ಯ ಆಯುರ್ವೇದ ಆಶ್ರಮದಲ್ಲಿ ಮೂಳೆ,ಚರ್ಮ,ಮಧುಮೇಹ,ಋತುಸ್ರಾವ,ಜೀರ್ಣಾಂಗವ್ಯೂಹ,ಶ್ವಾಸಕೊಶ,ಅಸ್ತಮಾ,ಮೂತ್ರಪಿಂಡ ಇತ್ಯಾದಿಗಳಿಗೆ ಸಂಬಂಧ ಪಟ್ಟಂತೆ
ಹತ್ತು ಹಲವು ಸಮಸ್ಯೆಗಳಿಗೆ ಶುದ್ಧ ಆಯುರ್ವೇದ ಪದ್ಧತಿಯಲ್ಲಿ ಚಿಕಿತ್ಸೆ ನೀಡಲಾಗುತ್ತದೆ.
ಆಶ್ರಮದಲ್ಲಿ ಅನುಸರಿಸುವ ಪಂಚಕರ್ಮ ಚಿಕಿತ್ಸಾ ಪದ್ಧತಿಯು
ವಮನ
ವಿರೇಚನ
ನಸ್ಯ
ವಸ್ತಿ ಹಾಗೂ
ರಕ್ತ ಮೊಕ್ಷಣಗಳನ್ನು ಒಳಗೊಂಡಿರುತ್ತದೆ.
ಕುಗ್ರಾಮವಾಗಿದ್ದ ಗ್ರಾಮವೊಂದರಲ್ಲಿ ಇಂತಹ ಚಿಕಿತ್ಸಾಕೇಂದ್ರವೊಂದನ್ನು ವ್ಯವಸ್ಥಿತವಾಗಿ ರೂಪುಗೊಳಿಸಿ ಆ ಮೂಲಕ ದೇಶೀಯ ರೋಗಿಗಳಿಗಷ್ಟೇ ಅಲ್ಲ
ಸಹಸ್ರಾರು ಮೈಲಿಗಳಿಂದಾಚೆಗಿಂದ ಅಪ್ಪಟ ಆಯುರ್ವೇದ ಚಿಕಿತ್ಸೆಗಾಗಿ ಬರುವ ವಿದೇಶಿಗರಿಗೂ ದೇಶೀಯ ಚಿಕಿತ್ಸಾ ಪದ್ಧತಿಯೊಂದರ ಪರಿಚಯ ಮಾಡಿಸಿ
ಯಶಸ್ವಿಯಾಗಿ ಮುನ್ನಡೆಸಿಕೊಂಡು ಹೋಗುತ್ತಿರುವ ಡಾ.ರಾಘವೇಂದ್ರ ಕಾರಂತ್ ಹಾಗೂ ಡಾ.ಪ್ರತೀಕ್ಷಾ ಕಾರಂತ್ ನಿಜಕ್ಕೂ ಅಭಿನಂದನಾರ್ಹರು.
ನಿಮಗೂ ಆಯುರ್ವೇದ ಚಿಕಿತ್ಸೆ ಪಡೆಯುವ ಹಾಗೂ ಅಪ್ಪಟ ಮಲೆನಾಡ ಸೊಗಡನ್ನು ಅನುಭವಿಸುವ ಮನಸ್ಸಾಯಿತೇ? ಹಾಗಾದರೆ ಸಂಪರ್ಕಿಸಿ:9448933101,08265231042


ಹೆಚ್ಚಿನ ಮಾಹಿತಿಗಾಗಿ ಭೇಟಿ ನೀಡಿ:http://panchajanyaayurveda.com/


ವಿಳಾಸ:
ಡಾ.ರಾಘವೇಂದ್ರ ಕಾರಂತ್
ಪಾಂಚಜನ್ಯ ಆಯುರ್ವೇದ ಆಶ್ರಮ
ಕಡೇಗದ್ದೆ
ಕುದ್ರೆಗುಂಡಿ ಅಂಚೆ
ಕೊಪ್ಪ ತಾ.
ಚಿಕ್ಕಮಗಳೂರು ಜಿಲ್ಲೆ-೫೭೭೧೨೭